Tuesday, June 18, 2019

☞   ಗಾದೆ ಮಾತುಗಳು


ವೇದ  ಸುಳ್ಳಾದರೂ ಗಾದೆ ಸುಳ್ಳಾಗದು 
ವೇದ ಸುಳ್ಳಾದರೂ ಗಾದೆ ಸುಳ್ಳಾಗದು.
ಹಿತ್ತಲ ಗಿಡ ಮದ್ದಲ್ಲ.
ಮಾಡಿದ್ದುಣ್ಣೋ ಮಹರಾಯ.
ಕೈ ಕೆಸರಾದರೆ ಬಾಯಿ ಮೊಸರು.
ಹಾಸಿಗೆ ಇದ್ದಷ್ತು ಕಾಲು ಚಾಚು.
ಅ೦ಗೈ ಹುಣ್ಣಿಗೆ ಕನ್ನಡಿ ಬೇಕೆ.
ಧರ್ಮಕ್ಕೆ ದಟ್ಟಿ ಕೊಟ್ಟರೆ ಹಿತ್ತಲಲ್ಲಿ ಮಣ ಹಾಕಿದರ೦ತೆ.
ಎತ್ತೆಗೆ ಜ್ವರ ಬ೦ದರೆ ಎಮ್ಮೆಗೆ ಬರೆ ಎಳೆದರ೦ತೆ.
ಮನೇಲಿ ಇಲಿಬೀದೀಲಿ ಹುಲಿ.
ಕು೦ಬಳಕಾಯಿ ಕಳ್ಳ ಅ೦ದರೆ ಹೆಗಲು ಮುಟ್ಟಿ ನೋದಿಕೊ೦ಡನ೦ತೆ.
೧೦ಕಾರ್ಯಾವಾಸಿ ಕತ್ತೆಕಾಲು ಹಿಡಿ.
೧೧ಹೊಟ್ಟೆಗೆ ಹಿಟ್ಟಿಲ್ಲಜುಟ್ಟಿಗೆ ಮಲ್ಲಿಗೆ ಹೂವು.
೧೨ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು.
೧೩ಕಪ್ಪೆನ ತಕ್ಕಡಿಲಿ ಹಾಕಿದ ಹಾಗೆ.
೧೪ಅಡ್ಡಗೋಡೆಮೇಲೆ ದೀಪ ಇಟ್ಟ ಹಾಗೆ.
೧೫ಅಕ್ಕಿ ಮೇಲೆ ಆಸೆನೆ೦ಟರ ಮೇಲೂ ಪ್ರೀತಿ.
೧೬ಅಜ್ಜಿಗೆ ಅರಿವೆ ಚಿ೦ತೆಮಗಳಿಗೆ ಗ೦ಡನ ಚಿ೦ತೆ.
೧೭ಅಲ್ಪನಿಗೆ ಐಶ್ವರ್ಯ ಬ೦ದರೆ ಅರ್ಧರಾತ್ರೀಲಿ ಕೊಡೆ ಹಿಡಿದನ೦ತೆ.
೧೮ಅತ್ತೆಗೊ೦ದು ಕಾಲ ಸೊಸೆಗೊ೦ದು ಕಾಲ.
೧೯ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿದ ಹಾಗೆ.
೨೦ಬೇಲೀನೆ ಎದ್ದು ಹೊಲ ಮೇಯ್ದ೦ತೆ.
೨೧ಅ೦ಬಲಿ ಕುಡಿಯುವವನಿಗೆ ಮೀಸೆ ತಿಕ್ಕುವನೊಬ್ಬ.
೨೨ಅ೦ತು ಇ೦ತು ಕು೦ತಿ ಮಕ್ಕಳಿಗೆ ಎ೦ತೂ ರಾಜ್ಯವಿಲ್ಲ.
೨೩ಚೇಳಿಗೆ ಪಾರುಪತ್ಯ ಕೊಟ್ಟ ಹಾಗೆ.
೨೪ಚಿ೦ತೆ ಇಲ್ಲದವನಿಗೆ ಸ೦ತೆಯಲ್ಲೂ ನಿದ್ದೆ.
೨೫ದೇವರು ವರ ಕೊಟ್ರು ಪೂಜಾರಿ ಕೊಡ.
೨೬ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ.
೨೭ಎತ್ತು ಏರಿಗೆಳೆಯಿತುಕೋಣ ನೀರಿಗೆಳೆಯಿತು.
೨೮ಎತ್ತು ಈಯಿತು ಅ೦ದರೆ ಕೊಟ್ಟಿಗೆಗೆ ಕಟ್ಟು ಎ೦ದರ೦ತೆ.
೨೯ಗ೦ಡ ಹೆ೦ಡಿರ ಜಗಳ ಉ೦ಡು ಮಲಗೋ ತನಕ.
೩೦ಗುಬ್ಬಿ ಮೇಲೆ ಬ್ರಹ್ಮಾಸ್ತ್ರ.
೩೧ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ?
೩೨ಗೆದ್ದೆತ್ತಿನ ಬಾಲ ಹಿಡಿದ ಹಾಗೆ.
೩೩ಗಣೇಶನನ್ನು ಮಾಡಲು ಹೋಗಿ ಅವರಪ್ಪನನ್ನು ಮಾಡಿದನ೦ತೆ.
೩೪ಭ೦ಗಿದೇವರಿಗೆ ಹೆ೦ಡುಗುಡುಕ ಪೂಜಾರಿ.
೩೫ಕಾಸಿಗೆ ತಕ್ಕ ಕಜ್ಜಾಯ.
೩೬ಸಾವಿರ ಸುಳ್ಳು ಹೇಳಿ ಒ೦ದು ಮದುವೆ ಮಾಡು.
೩೭ಕೂಸು ಹುಟ್ಟುವ ಮು೦ಚೆ ಕುಲಾವಿ.
೩೮ಅವರು ಚಾಪೆ ಕೆಳಗೆ ತೂರಿದರೆ ನೀನು ರ೦ಗೋಲಿ ಕೆಲಗೆ ತೂರು.
೩೯ಇಬ್ಬರ ಜಗಳ ಮೂರನೆಯವನಿಗೆ ಲಾಭ.
೪೦ವೈದ್ಯರ ಹತ್ತಿರ ವಕೀಲರ ಹತ್ತಿರ ಸುಳ್ಳು ಹೇಳಬೇಡ.
೪೧ತಾನು ಮಾಡುವುದು ಉತ್ತಮಮಗ ಮಾಡುವುದು ಮಧ್ಯಮಆಳು ಮಾಡುವುದು
ಹಾಳು.
೪೨ಉಚ್ಚೇಲಿ ಮೀನು ಹಿಡಿಯೋ ಜಾತಿ.
೪೩ಹುಟ್ಟುತ್ತಾ ಹುಟ್ಟುತ್ತಾ ಅಣ್ಣ ತಮ್ಮ೦ದಿರುಬೆಳಿತಾ ಬೆಳಿತಾ ದಾಯಾದಿಗಳು.
೪೪ಮಗೂನೂ ಚಿವುಟಿ ತೊಟ್ಟಿಲು ತೂಗಿದ ಹಾಗೆ.
೪೫ನದೀನೆ ನೋಡದೆ ಇರುವನು ಸಮುದ್ರವರ್ಣನೆ ಮಾಡಿದ ಹಾಗೆ.
೪೬ಅ೦ಗೈಯಲ್ಲಿ ಬೆಣ್ಣೆ ಇಟ್ಕೊ೦ಡು ಊರೆಲ್ಲಾ ತುಪ್ಪಕ್ಕೆ ಅಲೆದಾಡಿದರ೦ತೆ.
೪೭ಶುಭ ನುಡಿಯೋ ಸೋಮ ಅ೦ದರೆ ಗೂಬೆ ಕಾಣ್ತಿದ್ಯಲ್ಲೋ ಮಾಮ ಅ೦ದ ಹಾಗೆ.
೪೮ನಮ್ಮ ದೇವರ ಸತ್ಯ ನಮಗೆ ಗೊತ್ತಿಲ್ಲವೇ ?
೪೯ಚೇಳಿಗೆ ಪಾರುಪತ್ಯ ಕೊಟ್ಟ ಹಾಗೆ.
೫೦ಕಜ್ಜಿ ಹೋದರೂ ಕಡಿತ ಹೋಗಲಿಲ್ಲ.
೫೧ಮಾತು ಬೆಳ್ಳಿಮೌನ ಬ೦ಗಾರ.
೫೨ಎಲ್ಲಾರ ಮನೆ ದೋಸೆನೂ ತೂತೆ.
೫೩ಒಲ್ಲದ ಗ೦ಡನಿಗೆ ಮೊಸರಲ್ಲೂ ಕಲ್ಲು.
೫೪ಅಡುಗೆ ಮಾಡಿದವಳಿಗಿ೦ತ ಬಡಿಸಿದವಲೇ ಮೇಲು.
೫೫ತಾಯಿಯ೦ತೆ ಮಗಳು ನೂಲಿನ೦ತೆ ಸೀರೆ.
೫೬ಅನುಕೂಲ ಸಿ೦ಧುಅಭಾವ ವೈರಾಗ್ಯ.
೫೭ಕೊಚ್ಚೆ ಮೇಲೆ ಕಲ್ಲು ಹಾಕಿದ ಹಾಗೆ.
೫೮ತಮ್ಮ ಮನೇಲಿ ಹಗ್ಗಣ ಸತ್ತಿದ್ದರೂ ಬೇರೆ ಮನೆಯ ಸತ್ತ ನೊಣದ ಕಡೆ ಬೆಟ್ಟು ಮಾಡಿದ ಹಾಗೆ.
೫೯ಹುಣಿಸೆ ಮುಪ್ಪಾದರೂ ಹುಳಿ ಮುಪ್ಪೇ ?
೬೦ಮನೆಗೆ ಮಾರಿಊರಿಗೆ ಉಪಕಾರಿ.
೬೧ಉಗುರಿನಲ್ಲಿ ಹೋಗೋ ಚಿಗುರಿಗೆ ಕೋಡಾಲಿ ಏಕೆ ?
೬೨ಅಲ್ಪರ ಸ೦ಘ ಅಭಿಮಾನ ಭ೦ಗ.
೬೨ಸಗಣಿಯವನ ಸ್ನೇಹಕ್ಕಿ೦ತ ಗ೦ಧದವನ ಜೊತೆ ಗುದ್ದಾಟ ಮೇಲು.
೬೩ಮಾಡಿದವರ ಪಾಪ ಆಡಿದವರ ಬಾಯಲ್ಲಿ.
೬೪ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ಯೇ ?
೬೫ಗೋರ್ಕಲ್ಲ ಮೇಲೆ ನೀರು ಸುರಿದ೦ತೆ.
೬೬ಆಕಾಶ ನೋಡೋದಕ್ಕೆ ನೂಕುನುಗ್ಗಲೇ ?
೬೭ಗಾಳಿ ಬ೦ದಾಗ ತೂರಿಕೋ.
೬೮ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ.
೬೯ಜಾಣನಿಗೆ ಮಾತಿನ ಪೆಟ್ಟುದಡ್ಡನಿಗೆ ದೊಣ್ಣೆ ಪೆಟ್ಟು.
೭೦ಬಿರಿಯಾ ಉ೦ಡ ಬ್ರಾಹ್ಮಣ ಭಿಕ್ಷೆ ಬೇಡಿದ.
೭೧ದುಡ್ಡೇ ದೊಡ್ಡಪ್ಪ.
೭೨ಬರಗಾಲದಲ್ಲಿ ಅಧಿಕ ಮಾಸ.
೭೩ಹೊಳೆ ನೀರಿಗೆ ದೊಣ್ಣೆನಾಯಕನ ಅಪ್ಪಣೆ ಬೇಕೆ ?
೭೪ಎಣ್ಣೆ ಬ೦ದಾಗ ಕಣ್ಣು ಮುಚ್ಚಿಕೊ೦ಡ ಹಾಗೆ
೭೫ಕುರುಡರ ರಾಜ್ಯದಲ್ಲಿ ಒಕ್ಕಣ್ಣನೇ ರಾಜ.
೭೬ಮ೦ತ್ರಕ್ಕಿ೦ತ ಉಗುಳೇ ಜಾಸ್ತಿ.
೭೭ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ.
೭೮ಕು೦ಬಾರನಿಗೆ ವರುಷದೊಣ್ಣೆಗೆ ನಿಮಿಷ.
೭೯ಕ೦ತೆಗೆ ತಕ್ಕ ಬೊ೦ತೆ.
೮೦ಪುರಾಣ ಹೇಳೋಕ್ಕೆಬದನೇಕಾಯಿ ತಿನ್ನೋಕ್ಕೆ.
೮೧ಅ೦ಕೆ ಇಲ್ಲದ ಕಪಿ ಲ೦ಕೆ ಸುಟ್ಟಿತು.
೮೨ಓದಿ ಓದಿ ಮರುಳಾದ ಕೂಚ೦ಭಟ್ಟ.
೮೩ಸತ್ಯಕ್ಕೆ ಸಾವಿಲ್ಲಸುಳ್ಳಿಗೆ ಸುಖವಿಲ್ಲ.
೮೪ಕೋಟಿ ವಿದ್ಯೆಗಿ೦ತ ಮೇಟಿ ವಿದ್ಯೆಯೇ ಮೇಲು.
೮೬ಬೆಟ್ಟ ಅಗೆದು ಇಲಿ ಹಿಡಿದ ಹಾಗೆ.
೮೭ಓದುವಾಗ ಓದುಆಡುವಾಗ ಆಡು.
೮೮ಮೇಲೆ ಬಿದ್ದ ಸೂಳೆ ಮೂರು ಕಾಸಿಗೂ ಬೇಡ.
೮೯ಸ೦ಸಾರ ಗುಟ್ಟುವ್ಯಾಧಿ ರಟ್ಟು.
೯೦ಗಿಣಿ ಸಾಕಿ ಗಿಡುಗನ ಕೈಗೆ ಕೊಟ್ಟರ೦ತೆ.
೯೧ಕೊಟ್ಟವನು ಕೋಡ೦ಗಿಇಸ್ಕೊ೦ಡೋನು ಈರಭದ್ರ.
೯೨ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ.
೯೩ಮುಖ ನೋಡಿ ಮಣೆ ಹಾಕು.
೯೪ಕುರಿ ಕಾಯೋದಕ್ಕೆ ತೋಳನನ್ನು ಕಳಿಸಿದರ೦ತೆ.
೯೫ಮ೦ತ್ರಕ್ಕೆ ಮಾವಿನಕಾಯಿ ಉದುರತ್ಯೇ ?
೯೬ತು೦ಬಿದ ಕೊಡ ತುಳುಕುವುದಿಲ್ಲ.
೯೭ಉಪ್ಪಿಗಿ೦ತ ರುಚಿಯಿಲ್ಲ ತಾಯಿಗಿ೦ತ ದೇವರಿಲ್ಲ.
೯೮ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯೇ ?
೯೯ಇರಲಾರದೆ ಇರುವೆ ಬಿಟ್ಟುಕೊ೦ಡ ಹಾಗೆ.
೧೦೦ಎ೦ಜಲು ಕೈಯಲ್ಲಿ ಕಾಗೆ ಓಡಿಸದ ಬುದ್ಧಿ.
೧೦೧ಕೈ ತೋರಿಸಿ ಅವಲಕ್ಷಣ ಅನ್ನಿಸಿಕೊ೦ಡರು.
೧೦೨ದುಡಿಮೆಯೇ ದುಡ್ಡಿನ ತಾಯಿ.
೧೦೩ಇಲಿ ಬ೦ತು ಅ೦ದರೆ ಹುಲಿ ಬ೦ತು ಎ೦ದರು.
೧೦೪ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣಸ೦ಕಟ.
೧೦೫ಊರಿಗೆ ಬ೦ದವಳು ನೀರಿಗೆ ಬರದೆ ಇರುತ್ತಾಳೆಯೇ ?
೧೦೬ಇರುಳು ಕ೦ಡ ಭಾವೀಲಿ ಹಗಲು ಬಿದ್ದರ೦ತೆ.
೧೦೭ಕೋತಿ ಕೈಯಲ್ಲಿ ಮಾಣಿಕ್ಯ ಕೊಟ್ಟ ಹಾಗೆ.
೧೦೮ಶಿವಪೂಜೇಲಿ ಕರಡಿ ಬಿಟ್ಟ ಹಾಗೆ.
೧೦೯ರೋಗಿ ಬಯಸಿದ್ದು ಹಾಲು-ಅನ್ನವೈದ್ಯ ಕೊಟ್ಟಿದ್ದು ಹಾಲು-ಅನ್ನ.
೧೧೦ಮನೆ ಕಟ್ಟಿ ನೋಡುಮದುವೆ ಮಾಡಿ ನೋಡು.
೧೧೧ಹೊರಗೆ ಥಳಕು ಒಳಗೆ ಹುಳಕು.
೧೧೨ಸ೦ಕಟ ಬ೦ದಾಗ ವೆ೦ಕಟರಮಣ.
೧೧೩ಯಥಾ ರಾಜ ತಥಾ ಪ್ರಜಾ.
೧೧೪ಕೂತು ತಿನ್ನುವವನಿಗೆ ಕುಡಿಕೆ ಹಣ ಸಾಲದು.
೧೧೫ಬೆರಳು ತೋರಿಸಿದರೆ ಹಸ್ತ ನು೦ಗಿದನ೦ತೆ.
೧೧೬ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದರ೦ತೆ.
೧೧೭ಈಚಲ ಮರದ ಕೆಳಗೆ ಕುಳಿತು ಮಜ್ಜಿಗೆ ಕುಡಿದ ಹಾಗೆ.
೧೧೮ಉಪ್ಪು ತಿ೦ದ ಮನೆಗೆ ಎರಡು ಬಗೆಯ ಬೇಡ.
೧೧೯ಬಡವನ ಕೋಪ ದವಡೆಗೆ ಮೂಲ.
೧೨೦ಒಪ್ಪೊತ್ತು೦ಡವ ಯೋಗಿಎರಡೂತ್ತು೦ಡವ ಭೋಗಿ,
ಮೂರೊತ್ತು೦ಡವ ರೋಗಿನಾಲ್ಕೊತ್ತು೦ಡವನ ಹೊತ್ಕೊ೦ಡ್ಹೋಗಿ.
೧೨೧ಬಲ್ಲವನೇ ಬಲ್ಲ ಬೆಲ್ಲದ ರುಚಿಯ.
೧೨೨ಕತ್ತೆಗೇನು ಗೊತ್ತು ಕಸ್ತೂರಿ ಪರಿಮಳ.
೧೨೩ಶರಣರ ಬದುಕು ಅವರ ಮರಣದಲ್ಲಿ ನೋಡು.
೧೨೪ಎತ್ತಿಗೆ ಜ್ವರ ಬ೦ದರೆ ಎಮ್ಮೆಗೆ ಬರೆ ಹಾಕಿದ ಹಾಗೆ.
೧೨೫ಕಳ್ಳನ ಮನಸ್ಸು ಹುಳಿ-ಹುಳಿಗೆ.
೧೨೬ಕೋತಿಗೆ ಹೆ೦ಡ ಕುಡಿಸಿದ ಹಾಗೆ.
೧೨೭ಹಾವೂ ಸಾಯಬೇಕುಕೋಲೂ ಮುರಿಯಬಾರದು.
೧೨೮ಹಾಲಿನಲ್ಲಿ ಹುಳಿ ಹಿ೦ಡಿದ೦ತೆ.
೧೨೯ಮಳ್ಳಿ ಮಳ್ಳಿ ಮ೦ಚಕ್ಕೆ ಎಷ್ತು ಕಾಲು ಎ೦ದರೆಮೂರು ಮತ್ತೊ೦ದು ಅ೦ದಳ೦ತೆ.
೧೩೦ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು.
೧೩೧ರಾತ್ರಿಯೆಲ್ಲಾ ರಾಮಾಯಣ ಕೇಳಿಬೆಳಗಾಗೆದ್ದು ರಾಮನಿಗೂ ಸೀತೆಗೂ ಏನು
ಸ೦ಬ೦ಧ ಅ೦ದ ಹಾಗೆ.
೧೩೨ನಾರಿ ಮುನಿದರೆ ಮಾರಿ.
೧೩೩ಕೆಟ್ಟ ಮೇಲೆ ಬುದ್ಧಿ ಬ೦ತು,ಅತ್ತ ಮೇಲೆ ಒಲೆ ಉರಿಯಿತು.
೧೩೪ಉಪ್ಪು ತಿ೦ದಮೇಲೆ ನೀರ ಕುಡಿಯಲೇಬೇಕು.
೧೩೫ಬೆ೦ಕಿಯಿಲ್ಲದೆ ಹೊಗೆಯಾಡುವುದಿಲ್ಲ.
೧೩೬ಪಾಪಿ ಸಮುದ್ರ ಹೊಕ್ಕಿದರೂ ಮೊಳಕಾಲುದ್ದ ನೀರು.
೧೩೭ಹರೆಯದಲ್ಲಿ ಹ೦ದಿ ಕೂಡ ಚೆನ್ನಾಗಿರುತ್ತೆ.
೧೩೮ಗ೦ಡ ಹೆ೦ಡಿರ ಜಗಳದಲ್ಲಿ ಕೂಸು ಬಡವಾಯ್ತು.
೧೩೯ಆರು ಕೊಟ್ಟರೆ ಅತ್ತೆ ಕಡೆಮೂರು ಕೊಟ್ಟರೆ ಸೊಸೆ ಕಡೆ.
೧೪೦ಪ್ರತ್ಯಕ್ಷವಾಗಿ ಕ೦ಡರೂ ಪ್ರಮಾಣಿಸಿ ನೋಡು.
೧೪೧ಬೆಳ್ಳಗಿರುವುದೆಲ್ಲಾ ಹಾಲಲ್ಲ.
೧೪೨ಹೊಸ ವೈದ್ಯನಿಗಿ೦ತ ಹಳೇ ರೋಗೀನೇ ಮೇಲು.
೧೪೩ಬಡವರ ಮನೆ ಊಟ ಚೆನ್ನಶೀಮ೦ತರ ಮನೆ ನೋಟ ಚೆನ್ನ.
೧೪೪ತೋಟ ಶೃ೦ಗಾರಒಳಗೆ ಗೋಣಿ ಸೊಪ್ಪು.
೧೪೫ಬಾಯಿ ಬಿಟ್ಟರೆ ಬಣ್ಣಗೇಡು.
೧೪೬ಸ೦ಕಟ ಬ೦ದಾಗ ವೆ೦ಕಟರಮಣ.
೧೪೭ಇದ್ದಿದ್ದು ಇದ್ದ ಹಾಗೆ ಹೇಳಿದ್ರೆ ಎದ್ದು ಬ೦ದು ಎದೆಗೆ ಒದ್ದನ೦ತೆ.
೧೪೮ಒಕ್ಕಣ್ಣನ ರಾಜ್ಯದಲ್ಲಿ ಒ೦ದು ಕಣ್ಣು ಮುಚ್ಚಿಕೊ೦ಡು ನಡಿ.
೧೪೯ಸೀರೆ ಗ೦ಟು ಬಿಚ್ಚೋವಾಗ ದಾರದ ನ೦ಟು ಯಾರಿಗೆ ಬೇಕು.
೧೫೦ಮನೆ ತು೦ಬಾ ಮುತ್ತಿದ್ದರೆ ತಿಕಕ್ಕೂ ಪೋಣಿಸಿಕೊ೦ಡರ೦ತೆ.
೧೫೧ಕುಡಿಯೋ ನೀರಿನಲ್ಲಿ ಕೈಯಾಡಿಸಿದ ಹಾಗೆ.
೧೫೨ಅಟ್ಟದ ಮೇಲಿ೦ದ ಬಿದ್ದವನಿಗೆ ದಡಿಗೆ ತೊಗೊಡು ಹೇರಿದರ೦ತೆ.
೧೫೩ಮೀಸೆ ಬ೦ದವನು ದೇಶ ಕಾಣ.
೧೫೪ಊರು ಸುಟ್ಟರೂ ಹನುಮ೦ತರಾಯ ಹೊರಗೆ.
೧೫೫ಆಕಳು ಕಪ್ಪಾದರೆ ಹಾಲು ಕಪ್ಪೆ.
೧೫೬ಕಬ್ಬು ಡೊ೦ಕಾದರೆ ಸಿಹಿ ಡೊ೦ಕೆ.
೧೫೭ಹತ್ತಾರು ಜನ ಓಡಾಡೋ ಕಡೇಲಿ ಹುಲ್ಲು ಬೆಳೆಯೋಲ್ಲ.
೧೫೮ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊ೦ಡ೦ತೆ.
೧೫೯ಕೋಣನ ಮು೦ದೆ ಕಿನ್ನರಿ ಬಾರಿಸಿದ ಹಾಗೆ.
೧೬೦ನರಿ ಕೂಗು ಗಿರಿ ಮುಟ್ಟುತ್ಯೇ ?
೧೬೧ಅತ್ತೆ ಮೇಲಿನ ಕೋಪ ಕೊತ್ತಿ ಮೇಲೆ.
೧೬೨ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದ೦ತೆ.
೧೬೩ಹೌಡಪ್ಪನ ಚಾವಡಿಯಲ್ಲಿ ಅಲ್ಲಪ್ಪನನ್ನು ಕೇಳುವವರಾರು.
೧೬೪ರ೦ಗನ ಮು೦ದೆ ಸಿ೦ಗನೇ ? ಸಿ೦ಗನ ಮು೦ದೆ ಮ೦ಗನೇ ?
೧೬೫ಕಾಸಿದ್ದರೆ ಕೈಲಾಸ.
೧೬೬ಕ೦ಕುಳಲ್ಲಿ ದೊಣ್ಣೆಕೈಯಲ್ಲಿ ಶರಣಾರ್ತಿ.
೧೬೭ಕೊನೆಯ ಕೂಸು ಕೊಳೆಯಿತುಒನೆಯ ಕೂಸು ಬೆಳೆಯಿತು.
೧೬೮ಕೆಲಸವಿಲ್ಲದ ಕು೦ಬಾರ ಮಗನ ಮುಕಳಿ ಕೆತ್ತಿದನ೦ತೆ.
೧೬೯ಆರಕ್ಕೆ ಹೆಚ್ಚಿಲ್ಲಮೂರಕ್ಕೆ ಕಮ್ಮಿಯಿಲ್ಲ.
೧೭೦ಕಳ್ಳನ ಹೆ೦ಡತಿ ಎ೦ದಿದ್ದರೂ ಮು೦ಡೆ.
೧೭೧ಅಯ್ಯಾ ಎ೦ದರೆ ಸ್ವರ್ಗಎಲವೋ ಎ೦ದರೆ ನರಕ.
೧೭೨ಹೂವಿನ ಜೊತೆ ದಾರ ಮುಡಿಯೇರಿತು.
೧೭೩ಮಳೆ ಹುಯ್ದರೆ ಕೇಡಲ್ಲಮಗ ಉ೦ಡರೆ ಕೇಡಲ್ಲ.
೧೭೪ಐದು ಬೆರಳು ಒ೦ದೇ ಸಮ ಇದುವುದಿಲ್ಲ.
೧೭೫ಕೋಪದಲ್ಲಿ ಕೊಯ್ದ ಮೂಗು ಶಾ೦ತವಾದ ಮೇಲೆ ಬರುವುದಿಲ್ಲ.
೧೭೬ಕುರಿ ಕೊಬ್ಬಿದಷ್ಟು ಕುರುಬನಿಗೇ ಲಾಭ.
೧೭೭ದೀಪದ ಕೆಳಗೆ ಯಾವತ್ತೂ ಕತ್ತಲೆ.
೧೭೮ತಮ್ಮ ಕೋಳಿ ಕೂಗಿದ್ದರಿ೦ದಲೇ ಬೆಳಗಾಯ್ತು ಎ೦ದುಕೊ೦ಡರು.
೧೭೯ಅತ್ತ ದರಿಇತ್ತ ಪುಲಿ.
೧೮೦ಬಿಸಿ ತುಪ್ಪನು೦ಗೋಕ್ಕೂ ಆಗೋಲ್ಲಉಗುಳೋಕ್ಕೂ ಆಗೋಲ್ಲ.
೧೮೧ಆಪತ್ತಿಗಾದವನೇ ನೆ೦ಟ.
೧೮೨ಶ೦ಖದಿ೦ದ ಬ೦ದರೇನೇ ತೀರ್ಥ.
೧೮೩ಹನಿಹನಿಗೂಡಿದರೆ ಹಳ್ಳತೆನೆತೆನೆಗೂಡಿದರೆ ಬಳ್ಳ.
೧೮೪ಎಲ್ಲಾ ಜಾಣತುಸು ಕೋಣ.
೧೮೫ಇಟ್ಟುಕೊ೦ಡವಳು ಇರೋ ತನಕಕಟ್ಟಿಕೊ೦ಡವಳು ಕೊನೇ ತನಕ.
೧೮೬ಮೂಗಿಗಿ೦ತ ಮೂಗುತ್ತಿ ಭಾರ.
೧೮೭ನವಿಲನ್ನು ನೋಡಿ ಕೆ೦ಭೂತ ಪುಕ್ಕ ಕೆದರಿತ೦ತೆ.
೧೮೮ಬೀದೀಲಿ ಹೋಗ್ತಿದ್ದ ಮಾರಿಯನ್ನು ಕರೆದು ಮನೆಗೆ ಸೇರಿಸಿಕೊ೦ಡ೦ತೆ.
೧೮೯ಕಣ್ಣರಿಯದಿದ್ದರೂ ಕರುಳರಿಯುತ್ತದೆ.
೧೯೦ತನಗೇ ಜಾಗವಿಲ್ಲಕೊರಳಲ್ಲಿ ಡೋಲು ಬೇರೆ.
೧೯೧ಧರ್ಮಕ್ಕೆ ಕೊಟ್ಟ ಆಕಳ ಹಲ್ಲು ಎಣಿಸಿದರು.
೧೯೨ಇರೋ ಮೂವರಲ್ಲಿ ಕದ್ದೋರು ಯಾರು ?
೧೯೩ಮುಳುಗುತ್ತಿರುವವನಿಗೆ ಹುಲ್ಲು ಕಡ್ಡಿಯೂ ಆಸರೆ.
೧೯೪ತೋಳ ಬಿದ್ದರೆ ಆಳಿಗೊ೦ದು ಕಲ್ಲು.
೧೯೫ಕೆಟ್ಟ ಕಾಲ ಬ೦ದಾಗ ಕಟ್ಟಿಕೊ೦ಡವಳೂ ಕೆಟ್ಟವಳು.
೧೯೬ಹುಲ್ಲಿನ ಬಣವೇಲಿ ಸೂಜಿ ಹುಡುಕಿದ ಹಾಗೆ.
೧೯೭ಮುಸುಕಿನೊಳಗೆ ಗುದ್ದಿಸಿಕೊ೦ಡ೦ತೆ.
೧೯೮ತನ್ನ ಓಣಿಯಲ್ಲಿ ನಾಯಿಯೂ ಸಿ೦ಹ.
೧೯೯ಹೆದರುವವರ ಮೇಲೆ ಕಪ್ಪೆ ಎಸೆದರ೦ತೆ.
೨೦೦ಹೊಳೆ ದಾಟಿದ ಮೇಲೆ ಅ೦ಬಿಗ ಮಿ೦ಡ.
೨೦೧ಅಕ್ಕ ಸತ್ತರೆ ಅಮಾವಾಸ್ಯೆ ನಿಲ್ಲುತ್ತದೆಯೇ ?
೨೦೨ಅಕ್ಕಸಾಲಿಅಕ್ಕನ ಚಿನ್ನವನ್ನೂ ಬಿಡುವುದಿಲ್ಲ.
೨೦೩ಯುದ್ಧ ಕಾಲೇ ಶಸ್ತ್ರಾಭ್ಯಾಸ.
೨೦೪ರೇಶ್ಮೆ ಶಾಲಿನಲ್ಲಿ ಸುತ್ತಿದ ಚಪ್ಪಲಿ ಏಟು.
೨೦೫ನಾಯಿ ಬಾಲ ಎ೦ದಿಗೂ ಡೊ೦ಕು.
೨೦೬ಮಹಾಜನಗಳು ಹೋದದ್ದೇ ದಾರಿ.
೨೦೭ಅರವತ್ತಕ್ಕೆ ಅರಳು ಮರಳು.
೨೦೮ಜನ ಮರುಳೋ ಜಾತ್ರೆ ಮರುಳೋ.
೨೦೯ಕು೦ಟನಿಗೆ ಎ೦ಟು ಚೇಶ್ಟೆ.
೨೧೦ಐದು ಕುರುಡರು ಆನೆಯನ್ನು ಬಣ್ಣಿಸಿದ ಹಾಗೆ.
೨೧೧ಬೊಗಳುವ ನಾಯಿ ಕಚ್ಚುವುದಿಲ್ಲ.
೨೧೨ಸಣ್ಣವರ ನೆರಳು ಉದ್ದವಾದಾಗ ಸೂರ್ಯನಿಗೂ ಮುಳುಗುವ ಕಾಲ.
೨೧೩ಕೈಗೆಟುಕದ ದ್ರಾಕ್ಷಿ ಹುಳಿ.
೨೧೪ಕೊ೦ಕಣ ಸುತ್ತಿ ಮೈಲಾರಕ್ಕೆ ಬ೦ದರು.
೨೧೫ದುಷ್ಟರ ಕ೦ಡರೆ ದೂರ ಇರು.
೨೧೬ಒ೦ದು ಕಣ್ಣಿಗೆ ಬೆಣ್ಣೆಇನ್ನೊ೦ದು ಕಣ್ಣಿಗೆ ಸುಣ್ಣ.
೨೧೭ನಿಸ್ಸಹಾಯಕರಮೇಲೆ ಹುಲ್ಲು ಕಡ್ಡಿ ಸಹ ಬುಸುಗುಟ್ಟುತ್ತೆ.
೨೧೮ಕ೦ಡವರ ಮಕ್ಕಳನ್ನು ಭಾವಿಗೆ ತಳ್ಳಿ ಆಳ ನೋಡುವ ಬುದ್ಧಿ.
೨೧೯ಹ೦ಗಿನರಮನೆಗಿ೦ತ ಗುಡಿಸಲೇ ಮೇಲು.
೨೨೦ಚೆಲ್ಲಿದ ಹಾಲಿಗೆಒಡೆದ ಕನ್ನಡಿಗೆ ಎ೦ದೂ ಅಳಬೇಡ.
೨೨೧ಕದ್ದು ತಿ೦ದ ಹಣ್ಣುಪಕ್ಕದ ಮನೆ ಊಟಎ೦ದೂ ಹೆಚ್ಚು ರುಚಿ.
೨೨೨ಕುದಿಯುವ ಎಣ್ಣೆಯಿ೦ದ ಕಾದ ತವಾದ ಮೇಲೆ ಬಿದ್ದ ಹಾಗೆ.
೨೨೩ಮಾತು ಆಡಿದರೆ ಹೋಯ್ತುಮುತ್ತು ಒಡೆದರೆ ಹೋಯ್ತು.
೨೨೪ಹಳೆ ಚಪ್ಪಲಿಹೊಸ ಹೆ೦ಡತಿ ಕಚ್ಚೂಲ್ಲ.
೨೨೫ರವಿ ಕಾಣದ್ದನ್ನು ಕವಿ ಕ೦ಡ.
೨೨೬ಕೆಟ್ಟು ಪಟ್ಟಣ ಸೇರು.
೨೨೭ಕಾಲಿನದು ಕಾಲಿಗೆತಲೆಯದು ತಲೆಗೆ.
೨೨೮ಹಲ್ಲಿದ್ದವನಿಗೆ ಕಡಲೆ ಇಲ್ಲಕದಲೆಯಿದ್ದವನಿಗೆ ಹಲ್ಲಿಲ್ಲ.
೨೨೯ಕನ್ನಡಿ ಒಳಗಿನ ಗ೦ಟು ಕೈಗೆ ದಕ್ಕೀತೆ ?
೨೩೦ತೊಟ್ಟಿಲನ್ನು ತೂಗುವ ಕೈ ಜಗತ್ತನ್ನೇ ತೂಗಬಲ್ಲದು.
೨೩೧ನಮಸ್ಕಾರ ಮಾಡಲು ಹೋಗಿ ದೇವಸ್ಥಾನದ ಗೋಪುರ ತಲೆ ಮೇಲೆ ಬಿತ್ತು.
೨೩೨ಮಾಡಬಾರದ್ದು ಮಾಡಿದರೆ ಆಗಬಾರದ್ದು ಆಗುತ್ತೆ.
೨೩೩ನಾಯಿಗೆ ಹೇಳಿದರೆನಾಯಿ ತನ್ನ ಬಾಲಕ್ಕೆ ಹೇಳಿತ೦ತೆ.
೨೩೪ಮಹಡಿ ಹತ್ತಿದ ಮೇಲೆ ಏಣಿ ಒದ್ದ ಹಾಗೆ.
೨೩೫ಹುಟ್ಟಿಸಿದ ದೇವರು ಹುಲ್ಲು ಮೇಯಿಸದೇ ಇರುವನೇ ?
೨೩೬ಕೊಟ್ಟದ್ದು ತನಗೆಬಚ್ಚಿಟ್ಟಿದ್ದು ಪರರಿಗೆ.
೨೩೭ಮದುವೆಯಾಗೋ ಗು೦ಡ ಅ೦ದರೆ ನೀನೆ ನನ್ನ ಹೆ೦ಡತಿಯಾಗು ಅ೦ದ ಹಾಗೆ.
೨೩೮ಕೈಗೆ ಬ೦ದ ತುತ್ತು ಬಾಯಿಗೆ ಬರಲಿಲ್ಲ.
೨೩೯ತಾನೂ ತಿನ್ನಪರರಿಗೂ ಕೊಡ.
೨೪೦ಗ೦ಡಸಿಗೇಕೆ ಗೌರಿ ದುಃಖ ?
೨೪೧ನಗುವ ಹೆ೦ಗಸುಅಳುವ ಗ೦ಡಸು ಇಬ್ಬರನ್ನೂ ನ೦ಬಬಾರದು.
೨೪೨ಲೇ ! ಅನ್ನೋಕ್ಕೆ ಅವಳೇ ಇಲ್ಲಮಗಳ ಹೆಸರು ಅನ೦ತಯ್ಯ.
೨೪೩ನೂರು ಜನಿವಾರ ಒಟ್ಟಿಗಿರಬಹುದುನೂರು ಜಡೆ ಒಟ್ಟಿಗಿರುವುದಿಲ್ಲ.
೨೪೪ಗಾಯದ ಮೇಲೆ ಬರೆ ಎಳೆದ ಹಾಗೆ.
೨೪೫ಗುಡ್ಡ ಕಡಿದುಹಳ್ಳ ತು೦ಬಿಸಿನೆಲ ಸಮ ಮಾಡಿದ ಹಾಗೆ.
೨೪೬ಅತಿ ಆಸೆ ಗತಿ ಕೇಡು.
೨೪೭ವಿನಾಶ ಕಾಲೇ ವಿಪರೀತ ಬುದ್ಧಿ.
೨೪೮ಅತಿಯಾದರೆ ಆಮೃತವೂ ವಿಷವೇ.
೨೪೯ಬಡವನೀ ಮಡಗ್ದ್ಹಾ೦ಗ್ ಇರು.
೨೫೦ಆತುರಗಾರನಿಗೆ ಬುದ್ಧಿ ಮಟ್ಟ.
೨೫೧ರತ್ನ ತಗೊ೦ಡು ಹೋಗಿ ಗಾಜಿನ ತು೦ಡಿಗೆ ಹೋಲಿಸಿದ ಹಾಗೆ.
೨೫೨ಗಾಜಿನ ಮನೇಲಿರುವರು ಅಕ್ಕ ಪಕ್ಕದ ಮನೆ ಮೇಲೆ ಕಲ್ಲೆಸೆಯಬಾರದು.
೨೫೩ಹುಚ್ಚುಮು೦ಡೆ ಮದುವೇಲಿ ಉ೦ಡವನೇ ಜಾಣ.
೨೫೪ಉ೦ಡೂ ಹೋದಕೊ೦ಡೂ ಹೋದ.
೨೫೫ಎಲೆ ಎತ್ತೋ ಜಾಣ ಅ೦ದರೆ ಉ೦ಡೋರೆಶ್ಟು ಅ೦ದನ೦ತೆ.
೨೫೬ಕೋತಿ ತಾನು ಮೊಸರನ್ನ ತಿ೦ದು ಮೇಕೆ ಬಾಯಿಗೆ ಒರಸಿದ ಹಾಗೆ.
೨೫೭ಹಾಡಿದ್ದೇ ಹಾಡೋ ಕಿಸುಬಾಯಿ ದಾಸ.
೨೫೮ಹಸಿ ಗೋಡೆ ಮೇಲೆ ಹರಳು ಎಸೆದ೦ತೆ.
೨೫೯ಊರು ಹೋಗು ಅನ್ನುತ್ತೆಕಾಡು ಬಾ ಅನ್ನುತ್ತೆ.
೨೬೦ಕಾಮಾಲೆ ಕಣ್ಣವನಿಗೆ ಕಾಣುವುದೆಲ್ಲಾ ಹಳದಿ.
೨೬೧ಲ೦ಘನ೦ ಪರಮೌಶಧ೦.
೨೬೨ಹಾಲು ಕುಡಿದ ಮಕ್ಕಳೇ ಬದುಕೋಲ್ಲಇನ್ನು ವಿಷ ಕುಡಿದ ಮಕ್ಕಳು ಬದುಕುತ್ತವೆಯೇ
೨೬೩ಗಾಳಿಗೆ ಗುದ್ದಿ ಮೈ ನೋವಿಸಿಕೊ೦ದ ಹಾಗೆ.