☞   🌺ಭಾರತದ ಪ್ರಮುಖ ಬಂದರುಗಳು ಮತ್ತು ಅವುಗಳ ಪ್ರಮುಖ ಲಕ್ಷಣಗಳು 🌺

 

🌺ಭಾರತದ ಪ್ರಮುಖ ಬಂದರುಗಳು ಮತ್ತು ಅವುಗಳ ಪ್ರಮುಖ ಲಕ್ಷಣಗಳು 🌺


🌕 ಕೂೕಲ್ಕತಾ ಬಂದರು (ಹಲ್ದಿಯಾ ಸೇರಿದಂತೆ):-Kolkata Port (including Haldia)

—ಕೋಲ್ಕತಾದ ಬಂಗಾಳ ಕೊಲ್ಲಿಯಿಂದ 128 ಕಿ.ಮೀ, ದೂರದಲ್ಲಿರುವ ಹೂಗ್ಲಿ ನದಿಯ ತೀರದಲ್ಲಿದೆ. ಇದು ಒಂದು ನದಿ ತೀರದ ಬಂದರಾಗಿದೆ.ಕೋಲ್ಕತ್ತಾ ಬಂದರನ್ನು ಭಾರತದ ಚಹದ ಬಂದರು ಎಂದು ಕರೆಯಲಾಗುತ್ತಿದೆ.


🌕 ಹಾಲ್ಡಿಯಾ ಬಂದರು (Haldia):-

ಕೊಲ್ಕತ್ತಾ ಬಂದರಿನ ಒತ್ತಡ ಕಡಿಮೆ ಮಾಡಲು ನಿರ್ಮಿಸಿರುವ ಕೃತಕ ಬಂದರಾಗಿದೆ. ಕೋಲ್ಕತಾ ಬಂದರಿನ ವಿಪರೀತ ಹೂಳು ತುಂಬುವಿಕೆಯಿಂದಾಗುತ್ತಿದ್ದ  ದೊಡ್ಡ ಹಡಗುಗಳು ಪ್ರವೇಶ ತಡೆಯನ್ನು ನಿವಾರಿಸಲು ಈ ಹಲ್ದಿಯಾ ಬಂದರನ್ನು ಅಭಿವೃದ್ಧಿಪಡಿಸಲಾಯಿತು.


🌕 ಪಾರದೀಪ್ ಬಂದರು(Paradip Port):-ಒರಿಸ್ಸಾದ ಬಂಗಾಳ ಕೊಲ್ಲಿಯ ತೀರದಲ್ಲಿದೆ. ಭಾರತವು ಇಲ್ಲಿಂದ ಜಪಾನ್ ಗೆ ಕಚ್ಚಾ ಕಬ್ಬಿಣವನ್ನು ರಫ್ತು ಮಾಡುತ್ತದೆ.


🌕ವಶಾಖಪಟ್ಟಣಂ ಬಂದರು (Vishakhapatnam Port):-

ಇದು ಅತ್ಯಂತ ಆಳವಾದ ಬಂದರಾಗಿದ್ದು, ಆಂಧ್ರಪ್ರದೇಶದಲ್ಲಿದೆ.  ಇದು ಭಿಲಾಯಿ ಮತ್ತು ರೂರ್ಕೆಲಾ ಪ್ರದೇಶಗಳ ಉಕ್ಕು ಉತ್ಪಾದನೆಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸುತ್ತದೆ.


🌕 ಚನೈ ಬಂದರು (Chennai Port):-

ಹಳೆಯ ಕೃತಕ ಬಂದರು. ಈ ಬಂದರು ದಟ್ಟಣೆಯನ್ನು ನಿರ್ವಹಿಸುವ ಸಾಮರ್ಥ್ಯದ ವಿಷಯದಲ್ಲಿ ಎರಡನೇ ಮುಂಬೈ ನಂತರ ಸ್ಥಾನದಲ್ಲಿದೆ.


🌕ಎನ್ನೋರ್ ಬಂದರು(Ennore Port):-ಇದನ್ನು 2001ರಲ್ಲಿ ಪ್ರಮುಖ ಬಂದರು ಎಂದು ಘೋಷಿಸಲಾಯಿತು.  ಇದು ಖಾಸಗಿ (ಕಾರ್ಪೊರೇಟ್) ಸಹಭಾಗಿತ್ವದಲ್ಲಿರುವ ಮೊದಲ ಬಂದರಾಗಿದೆ. ಉಷ್ಣ ಸ್ಥಾವರಕ್ಕೆ ಬೇಕಾದ ಕಲ್ಲಿದ್ದಲನ್ನು ತಮಿಳುನಾಡು ವಿದ್ಯುಚ್ಛಕ್ತಿ ಮಂಡಳಿ ಪವರ್ ಸ್ಟೇಷನ್ ಗೆ ಪೂರೈಸಲು ಈ ಬಂದರನ್ನು ಎಲ್ಲಾ ರೀತಿಯಿಂದ ಸುಸಜ್ಜಿತ ಆಧುನೀಕರಣಗೊಳಿಸಲಾಗಿದೆ.


🌕 ಟುಟಿಕೊರಿನ್ ಬಂದರು

(Tuticorin Port):-

ಪಾಂಡ್ಯ ರಾಜರ ಆಳ್ವಿಕೆಯಲ್ಲಿ ಅಸ್ತಿತ್ವಕ್ಕೆ ಬಂದಿತು. ಇದು ಕೃತಕ ಆಳವಾದ ಸಮುದ್ರದ ಬಂದರನ್ನು ಹೊಂದಿದೆ.


🌕 ಕೂಚ್ಚಿನ್ ಬಂದರು(Cochin Port):-ಇದು ಕೇರಳ ಕರಾವಳಿಯಲ್ಲಿರುವ ಉತ್ತಮವಾದ ನೈಸರ್ಗಿಕ ಬಂದರು. ಚಹಾ, ಕಾಫಿ ಮತ್ತು ಮೆಣಸು ಪದಾರ್ಥಗಳ ರಫ್ತು ಹಾಗು ಪೆಟ್ರೋಲಿಯಂ ಮತ್ತು ರಸ ಗೊಬ್ಬರಗಳ ಆಮದನ್ನು ನಿಭಾಯಿಸುತ್ತದೆ.


🌕 ನವ ಮಂಗಳೂರು ಬಂದರು(New Mangalore Port):-

ಇದನ್ನು 'ಕರ್ನಾಟಕದ ದ್ವಾರ' ಎಂದು ಕರೆಯುತ್ತಾರೆ. ಕುದುರೆಮುಖದಲ್ಲಿ ತೆಗೆಯುವ ಕಬ್ಬಿಣದ ಅದಿರಿನ ರಫ್ತು ನಿಭಾಯಿಸುತ್ತದೆ.


🌕 ಮರ್ಮಗೋವಾ ಬಂದರು (Marmugao Port) :-

ಮರ್ಮಗೋವಾ ಬಂದರು ಗೋವಾ ರಾಜ್ಯದ ಝವಾರಿ ಕೊಲ್ಲಿಯ ಪ್ರದೇಶದಲ್ಲಿದೆ. ಇದು ನೌಕಾ ನೆಲೆಯನ್ನು ಹೊಂದಿದ್ದು, ಭಾರತದ ಪ್ರಮುಖ ಕಬ್ಬಿಣದ ಅದಿರಿನ ರಫ್ತಿಗೆ ಹೆಸರಾದ ಬಂದರಾಗಿದೆ.


🌕 ಮುಂಬೈ ಬಂದರು (Mumbai Port):-ಇದು ಒಂದು ನೈಸರ್ಗಿಕ ಬಂದರು. ಭಾರತದ ಹೊಸ ಅತಿ ಜನನಿಬಿಡ ಬಂದರಾಗಿದೆ.


🌕ನವಸೇವಾ ಬಂದರು (navaseva port) :-ಇದನ್ನು ಮುಂಬೈ ಬಂದರು ಬಳಿ ಅಭಿವೃದ್ಧಿಪಡಿಸಲಾಗುತ್ತಿದೆ.Mumbai ಬಂದರಿನ ಒತ್ತಡವನ್ನು ತಗ್ಗಿಸುವ ಉದ್ದೇಶದಿಂದ ನವಶೇವಾ ಬಂದರನ್ನು ನಿರ್ಮಿಸಲಾಗಿದೆ.


🌕ಜವಾಹರಲಾಲ್ ನೆಹರು ಬಂದರು(Jawaharlal Nehru Port):-

ವಿಶ್ವದ ವೇಗವಾಗಿ ಬೆಳೆಯುತ್ತಿರುವ ಬಂದರುಗಳಲ್ಲಿ ಇದು 5 ಸ್ಥಾನದಲ್ಲಿದೆ.


🌕ಕಾಂಡ್ಲಾ ಬಂದರು(Kandla Port):- ಇದನ್ನು ಕರಾಚಿ ಬಂದರಿನ ವಿಭಜನೆಯ ನಂತರ ಪರ್ಯಾಯವಾಗಿ  ಅಭಿವೃದ್ಧಿಪಡಿಸಲಾಯಿತು ಇದು ಒಂದು ಉಬ್ಬರವಿಳಿತದ ಬಂದರಾಗಿದ್ದು, ಮುಕ್ತ ವ್ಯಾಪಾರ ವಲಯವಾಗಿದೆ. ಇದು ಕಛ್ ಖಾರಿಯ ರಣ್ ಪ್ರದೇಶದ ಶಿರೋಭಾಗದಲ್ಲಿದೆ.

0 Comments:

Post a Comment